ಶಾಲೆಯ ಪ್ರವೇಶದ ಮೇಲಿನ ಫಲಕದಲ್ಲಿ 'ತಲೀಮ್' ಎಂದು ಬರೆದಿದೆ (ಉರ್ದುವಿನಲ್ಲಿ 'ಶಿಕ್ಷಣ' ಎಂದರ್ಥ). ಒಳಗೆ ಕಾಲಿಡುತ್ತಿದ್ದಂತೆ ನೀವು ಮೊದಲನೇದಾಗಿ ನೋಡುವುದು, ಎಲ್ಲಾ ಪೆಹೆಲ್ವಾನರ ದೇವನಾದ ಹನುಮಂತನ ಚಿತ್ರ. ವಿಧವಿಧ ಸಂಸ್ಕೃತಿಗಳ ಎಂತಹ ಸಮ್ಮಿಶ್ರಣ. ಪಶ್ಚಿಮ ಗ್ರಾಮಾಂತರ ಮಹಾರಾಷ್ಟ್ರದಲ್ಲಿ ಕುಸ್ತಿ ಶಾಲೆಯನ್ನು ಅಖಾರಾ ಎಂದೆನ್ನದೆ ತಾಲೀಮೆಂದು ಕರೆಯುತ್ತಾರೆ. ಭಾರತದ ವಿಭಜನೆಗಿಂತಲೂ ಮುಂಚೆ ಪಂಜಾಬಿನ ತಾಲೀಮುಗಳೊಂದಿಗೆ ಬೆಳೆಸಿಕೊಂಡು ಬಂದಂತಹ, ನೂರು ವರ್ಷಗಳು ಮೀರಿರುವ, ಸಂಬಂಧದ ಚಿಹ್ನೆಯಾಗಿದೆ. ವಿಶೇಷವಾಗಿ, ಹಿಂದಿನಕಾಲದ ಕೊಲ್ಹಾಪುರ ರಾಜ್ಯವನ್ನು ಆಳುತ್ತಿದ್ದ ಮತ್ತು ಸಾಮಾಜಿಕ ಸುಧಾರಕ ಎಂದು ಪ್ರಸಿದ್ಧನಾಗಿದ್ದ ಶಾಹು ಮಹಾರಾಜ ಮಹಾನ್ ಕುಸ್ತಿ ಉತ್ಸಾಹಿಯೂ ಆಗಿದ್ದರು. ಅವರು ಅವಿಭಜಿತ ಭಾರತದಾದ್ಯಂತದ ಕುಸ್ತಿಪಟುಗಳನ್ನು ಕೊಲ್ಹಾಪುರಕ್ಕೆ ಕರೆತಂದರು. ಆ ಕುಸ್ತಿಪಟುಗಳಲ್ಲಿ ಹಲವರು ಪಂಜಾಬ್ನಿಂದ ಬಂದಿದ್ದರು.
ಇವತ್ತಿಗೂ, ಗ್ರಾಮೀಣ ಪಾಶ್ಚಾತ್ಯ ಮಹಾರಾಷ್ಟ್ರದಲ್ಲಿ ನಡೆಯುವ ದೊಡ್ಡ ಕುಸ್ತಿ ಪಂದ್ಯಾವಳಿಗಳಲ್ಲಿ ಪಾಕಿಸ್ತಾನ, ಇರಾನ್, ಟರ್ಕಿ, ಮತ್ತು ಕೆಲವು ಆಫ್ರಿಕಾದ ದೇಶಗಳ ಪ್ರಮುಖ ಕುಸ್ತಿಗಾರರು ಪಾಲ್ಗೊಳ್ಳುತ್ತಾರೆ. ಹಿಂದೂ ಪುರುಷರಿಂದ ಕೂಡಿದ ಈ ಪ್ರೇಕ್ಷಕರು ಪಾಕಿಸ್ತಾನ ಮತ್ತು ಇರಾನಿನ ಕುಸ್ತಿಗಾರ ದೊಡ್ಡ ಅಭಿಮಾನಿಗಳು. ದೊಡ್ಡ ಸಹಕಾರಿ ಸಕ್ಕರೆ ಕಾರ್ಖಾನೆ ಮತ್ತು ಡೈರಿ ಸಂಕೀರ್ಣ ನಡೆಸುತ್ತಿರುವ, ಶಾಸಕಾಂಗ ಸಭೆಯಲ್ಲಿ ಕೋಲ್ಹಪುರವನ್ನು ಪ್ರತಿನಿಧಿಸುತ್ತಿರುವ ಎಂ.ಎಲ್.ಎ. ವಿನಯ್ ಕೋರೆ, "ಜನರು ಹೊರದೇಶದ ಕುಸ್ತಿಗಾರರಿಂದ ಮಗ್ನರಾಗಿದ್ದಾರೆ", ಎಂದರು. ಕೋಲ್ಹಪುರ ಜಿಲ್ಲೆಯ ವಾರಾಣಾನಗರದಲ್ಲಿರುವ ಮಹಾರಾಷ್ಟ್ರದ ಅತಿದೊಡ್ಡ ಕುಸ್ತಿ ಮೈದಾನದಲ್ಲಿ ಪ್ರತಿ ವರ್ಷದ ಡಿಸೆಂಬರ್ 13ರರಂದು ನಡೆಯುವ ಪಂದ್ಯಾವಳಿಯನ್ನು ಆಯೋಜಿಸುತ್ತಾರೆ.
"ಮೂರು ಲಕ್ಷ ಜನರನ್ನು ಒಟ್ಟುಗೂಡಿಸಬಹುದು" ಅಂದರು ಕೋರೆ. "ಕೆಲವೊಮ್ಮೆ, ವೀಸಾ-ಗಳಿಗೆ ಬಹಳ ಗೊಂದಲವಾಗುತ್ತದೆ. ಒಂದು ವರ್ಷ, ಪಾಕಿಸ್ತಾನಿಗಳ ವೀಸಾ ಬರುವುದುಅ ತುಂಬಾ ತಡವಾಯ್ತು. ಅವರ ಕುಸ್ತಿ ಪಟುಗಳನ್ನು ಇಸ್ಲಾಮಾಬಾದ್ನಿಂದ ದೆಹಲಿ, ಅಲ್ಲಿಂದ ಪುಣೆಗೆ ವಿಮಾನದಲ್ಲಿ ಬಂದರು. ಪುಣೆಯಿಂದ ಅವರನ್ನು ಗಾಡಿಯಲ್ಲಿ ವಾರಾಣಾಗೆ ಕರೆತಂದೆವು.ಲಕ್ಷಗಟ್ಟಲೆ ಜನ ತಾಳ್ಮೆಯಿಂದ 12-13 ಘಂಟೆಗಳು ಅವರನ್ನು ನೋಡಲು ಕಾದಿದ್ದರು."
ಮಹಾರಾಷ್ಟ್ರದ ತಾಲೀಮುಗಳಲ್ಲಿ ಗುರುಗಳು, ಆಧ್ಯಾತ್ಮಿಕತೆ ಮತ್ತು ಜಾತ್ಯತೀತತೆಯನ್ನು ಅಳಪಡಿಸುವ ನೈತಿಕವಾದ ಶಿಕ್ಷಣಕ್ಕೆ ಒತ್ತುಕೊಡುತ್ತಾರೆ. ಅವರು ಶಿಷ್ಯಂದರಿಗೆ ಗಮ ಪೆಹೆಲ್ವಾನನ ಕಥೆ (ಅವನ ಕಾಲದಲ್ಲಿ ಜಗತ್ತಿನ ಶ್ರೇಷ್ಠ ಕುಸ್ತಿಗಾರರನ್ನು ಸೋಲಿಸಿ ಅಜೇಯನಾಗಿದ್ದ ಕುಸ್ತಿಪಟು) ಹೇಳುತ್ತಾರೆ. ಗಮ ಪಂಜಾಬಿನಲ್ಲಿ ಹುಟ್ಟಿ 1947ರ ನಂತರ ಪಾಕಿಸ್ತಾನದಲ್ಲೇ ಉಳಿದಂತಹ ಮುಸಲ್ಮಾನ. ಭಾರತದ ವಿಭಜನೆಯ ಸಮಯದಲ್ಲಿ ನಡೆದಂತಹ ಗಲಭೆಗಳಲ್ಲಿ ಆತ ತನ್ನ ಹಿಂದೂ ನೆರೆಹೊರೆಯವರ ಮನೆಯ ಮುಂದೆ ಅಲುಗಾಡದ ಬಂಡೆಯಂತೆ ನಿಲ್ಲುತ್ತಿದ್ದ. "ಕುಸ್ತಿ ಪಟುವೆಂದರೆ ಹೀಗಿರಬೇಕು" ಎನ್ನುವುದು ಅಂದಿನ ಆಡುಮಾತು.




