"ನನ್ನಓದು ಮುಗಿದ ನಂತರ, ಅಧಿಕಾರಿಯಾಗಲು ಬಯಸುತ್ತೇನೆ - ಗೃಹರಕ್ಷಕ ಅಧಿಕಾರಿ" ಎಂದು 14 ವರ್ಷದ ಸಂಧ್ಯಾ ಸಿಂಗ್ ಹೇಳಿದಳು. ಅವಳ 16 ವರ್ಷದ ಅಣ್ಣ ಶಿವಂ, ಸೈನ್ಯದಲ್ಲಿ ಕೆಲಸ ಹುಡುಕುವ ಆಶಯಹೊಂದಿದ್ದಾನೆ ಮತ್ತು 14 ವರ್ಷದ ವಯಸ್ಸಿನಿಂದಲೂಅದಕ್ಕಾಗಿ 'ತರಬೇತಿ' ಪಡೆಯುತ್ತಿದ್ದಾನೆ. "ನಾನು ಬೆಳಿಗ್ಗೆ 4 ಗಂಟೆಗೆ ಎಚ್ಚರಗೊಂಡು ಪ್ರತಿದಿನ ವ್ಯಾಯಾಮ ಮಾಡುತ್ತೇನೆ" ಎಂದು ಅವನು ಹೇಳಿದನು, "ಸೈನಿಕ ತರಬೇತಿಯ ಬಗ್ಗೆಏನು ಕೇಳಿದರೂ - [ಬಾರ್ಗಳಿಂದ] ಹೇಗೆ ನೇತಾಡುವುದು, ಪುಷ್-ಅಪ್ಗಳು, ಆರೀತಿಯ ಕೆಲಸಗಳು - ಯೂಟ್ಯೂಬ್ ಲಕ ನೋಡಿ ನಾನು ಅದನ್ನು ಮಾಡುತ್ತೇನೆ."
ಉತ್ತರ ಪ್ರದೇಶದ ಜಲೌನ್ ಜಿಲ್ಲೆಯಬಿನೌರಾ ಗ್ರಾಮದಲ್ಲಿರುವ ತಮ್ಮ ಮನೆಯ ಛಾವಣಿಯಿಂದಅವರು ನನ್ನೊಂದಿಗೆ ಫೋನ್ನಲ್ಲಿ ಮಾತನಾಡುತ್ತಿದ್ದರು. ಅಣ್ಣ-ತಂಗಿಯರು ಮೇ 21ರಂದುಪೋಷಕರು ಕೆಲಸ ಮಾಡುತ್ತಿದ್ದ ಆಂಧ್ರಪ್ರದೇಶದಕಲಿಕಿರಿ ಗ್ರಾಮದಿಂದ ಇಲ್ಲಿಗೆ ಮರಳಿದರು. "ಮನೆಗೆ ತಲುಪಿದಾಗ, ಇಲ್ಲಿ ಏನೂಇರಲಿಲ್ಲ, ಮತ್ತು ನಾವು ಕೂಡಏನನ್ನೂ ಹೊತ್ತು ತಂದಿರಲಿಲ್ಲ" ಎಂದುಅವರ ತಾಯಿ 32 ವರ್ಷದರಾಮ್ದೇಕಲಿ ಹೇಳುತ್ತಾರೆ. "ನಾವು ಆ ರಾತ್ರಿಖಾಲಿ ಹೊಟ್ಟೆಯಲ್ಲಿ ಮಲಗಿದೆವು..."
ಜುಲೈ 8ರಂದು, ಶಿವಂ ತನ್ನ 10ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿಶೇ. 71ರಷ್ಟು ಅಂಕಗಳೊಂದಿಗೆ ಉತ್ತೀರ್ಣನಾಗಿದ್ದಾನೆಎಂದು ರಾಮ್ದೇಕಲಿ ಹೆಮ್ಮೆಯಿಂದ ನನಗೆತಿಳಿಸಿದರು. ಅವನ 11 ಮತ್ತು 12ನೇತರಗತಿಯ ಪ್ರವೇಶ ವಿಧಾನದ ಬಗ್ಗೆವಿಚಾರಿಸಿದಾಗ ಅವರ ಸ್ವರ ಬದಲಾಯಿತು. "ನಮ್ಮ ಮಕ್ಕಳು ಆನ್ಲೈನ್ಶಾಲೆಗೆ ಹೇಗೆ ಹೋಗುವುದು ಎಂಬ ಬಗ್ಗೆಚಿಂತಿತರಾಗಿದ್ದಾರೆ. ನಾವು [ಆಂಧ್ರಪ್ರದೇಶಕ್ಕೆ] ಹಿಂತಿರುಗಿದರೆ, ಫೋನ್ ನಮ್ಮೊಂದಿಗೆ ಹೋಗುತ್ತದೆ. ಶಿವಂ ಯುಪಿಯಲ್ಲಿ ಆನ್ಲೈನ್ನಲ್ಲಿ ಹೇಗೆಅಧ್ಯಯನ ಮಾಡುತ್ತಾನೆ? ಮತ್ತು ನಾವು ಇಲ್ಲಿಯೇಇದ್ದರೆ, ಅವರ ಶಿಕ್ಷಣದ ಖರ್ಚನ್ನು ಹೇಗೆ ಭರಿಸುವುದು?" ಎಂದು ಅವರು ಕೇಳಿದರು. ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ಇಬ್ಬರು ಮಕ್ಕಳ ಒಟ್ಟುವಾರ್ಷಿಕ ಶುಲ್ಕ 15,000 ರೂ.
ಕೆಲವು ತಿಂಗಳ ಹಿಂದಿನವರೆಗೂ, ರಾಮದೇಕಲಿಮತ್ತು ಅವರ ಪತಿ 37 ವರ್ಷದಬೀರೇಂದ್ರ ಸಿಂಗ್, ಆಂಧ್ರಪ್ರದೇಶದ ಚಿತ್ತೂರುಜಿಲ್ಲೆಯ ಕಲಿಕಿರಿ ಗ್ರಾಮದಲ್ಲಿ ಮೂರುಪಾನಿ ಪುರಿ ಬಂಡಿಗಳನ್ನು ನಡೆಸುತ್ತಿದ್ದರು. ಸಂಧ್ಯಾ ಅವರೊಂದಿಗೆ ವಾಸಿಸುತ್ತಿದ್ದರು, ಆದರೆಶಿವಂ ಜಲೌನ್ ಜಿಲ್ಲೆಯ ಬರ್ದಾರ್ಗ್ರಾಮದಲ್ಲಿ ತನ್ನ ತಾಯಿಯ ಅಜ್ಜ-ಅಜ್ಜಿಯರೊಂದಿಗೆ ವಾಸಿಸುತ್ತಿದ್ದರು. ಈ ಕುಟುಂಬವುಅಲೆಮಾರಿ ಬುಡಕಟ್ಟುಗಳಡಿ ಪಟ್ಟಿ ಮಾಡಲಾದ ಪಾಲ್ಸಮುದಾಯಕ್ಕೆ ಸೇರಿದೆ.









