ಗರೀಬ್ ನಗರದ ಗಾಳಿಯ ತುಂಬ ಈಗ ಧೂಳು ಮತ್ತು ಕಣ್ಣೀರಿನ ಕಣಗಳೇ ತುಂಬಿವೆ.
2026ರ ಮೇ ತಿಂಗಳ 19-23 ತಾರೀಖಿನ ನಡುವೆ ನಡೆದ ಅತಿಕ್ರಮಣ ತೆರವು ಅಭಿಯಾನದಡಿ ಮುಂಬಯಿಯ ಬಾಂದ್ರ ಪ್ರದೇಶದ ಪೂರ್ವ ಭಾಗದಲ್ಲಿ ಸುಮಾರು 500 ಗುಡಿಸಲುಗಳನ್ನು ನೆಲಸಮ ಮಾಡಲಾಗಿದೆ. ಗುಡಿಸಲುಗಳಲ್ಲಿ ಇದ್ದವರೆಲ್ಲ ದಿನಗೂಲಿ ಕಾರ್ಮಿಕರು ಮತ್ತು ಮನೆಗೆಲಸ ಮಾಡುವವರು.
ಈ ಪ್ರದೇಶದಲ್ಲಿ ಎಲ್ಲಿ ನೋಡಿದರೂ ಗುಡಿಸಲುಗಳ ಉಳಿಕೆಗಳೇ ರಾಶಿ ಬಿದ್ದಿವೆ.
ಅಲ್ಲೇ ಹಾಕಲಾಗಿದ್ದ ಟಾರ್ಪಲಿನ್ ಚಪ್ಪರದಡಿ ಆಲಿಯಾ ಶೇಖ್, ರುಕ್ಸರ್ಖಾನ್ಅಫ್ಸರ್, ಅಸ್ಮಾಶೇಖ್ಮತ್ತುಹೀನಾಖಾನ್ ಕುಳಿತಿದ್ದರು. ಅವರು ಈಗ ಮೊದಲು ಮನೆಯಿದ್ದ ಜಾಗದ ಎದುರಿಗಿರುವ ಕಾಲುದಾರಿಯ ಮೇಲೆ ಮಲಗಿ ರಾತ್ರಿ ಕಳೆಯುತ್ತಿದ್ದಾರೆ. ಇಲ್ಲಿ ಮುಸ್ಲಿಮರೇ ದೊಡ್ಡ ಸಂಖ್ಯೆಯಲ್ಲಿದ್ದಾರೆ.
ಮೇ 17ರ ಸಂಜೆ ಗರೀಬ್ ನಗರದ ಜನರಿಗೆ ಬಾಂದ್ರಾ ಸುತ್ತಮುತ್ತಲಿನ ಎಲ್ಲಾ ಗುಡಿಸಲುಗಳನ್ನು ಎರಡು ದಿನಗಳಲ್ಲಿ ನೆಲಸಮಗೊಳಿಸಲಾಗುವುದು ಎಂದು ನೋಟಿಸ್ ಕೊಡಲಾಗಿತ್ತು.
ಈ ಹೆಚ್ಚಿನ ಮನೆಗಳವರು ಆಚರಿಸುವ ಹಬ್ಬ ಹತ್ತಿರದಲ್ಲೇ ಇತ್ತು. “ಇನ್ಸಾನ್ ಕೀ ಇನ್ಸಾನಿಯತ್ ಕಹಾಂ ಹೈ? [ಜನರಲ್ಲಿ ಮನುಷ್ಯತ್ವ ಎಲ್ಲಿ ಉಳಿದಿದೆ]?” ಎಂದು 52 ವರ್ಷದ ಗೃಹಿಣಿ ಅಲಿಯಾ ಈ ವರದಿಗಾರರ ಬಳಿ ಕೇಳಿದರು. ಅವರು ತನ್ನ ಸೊಸೆ ಮತ್ತು ಮೂವರು ಮೊಮ್ಮಕ್ಕಳಿಗೆ ಹಬ್ಬಕ್ಕೆಂದು ಖರೀದಿಸಿದ್ದ ಹೊಸ ಬಟ್ಟೆಗಳು ಅವರ ಮನೆಯ ಇತರ ವಸ್ತುಗಳು ತುಂಬಿದ್ದ ಚೀಲದಲ್ಲಿದ್ದವು.
















