ತನ್ನ ಇಪ್ಪತ್ತು ವರ್ಷಗಳ ಮರಗೆಲಸದಲ್ಲಿ, ಬಲ್ಬೀರ್ ವಿಶ್ವಕರ್ಮ ಏಳು ದೇವಾಲಯಗಳನ್ನು ನಿರ್ಮಿಸಿದ್ದಾರೆ. ಉತ್ತರಖಂಡದ ಪರ್ವತ ಪ್ರದೇಶದಲ್ಲಿನ ಈ ಕಲೆಯ ಕುರಿತು ಬಲ್ಬೀರ್ ಅವರಿಗೆ ತಿಳಿಯದಿರುವ ಸಂಗತಿಗಳು ಬಹಳ ಕಡಿಮೆ.
"ಯೇ ಹಮಾರಾ ಖಾನ್ದಾನಿ ಕಾಮ್ ಹೈ, ಬಾಪ್ ದಾದಾ ಕೇ ಟೈಮ್ ಸೇ [ಇದು ನಮ್ಮ ಪೂರ್ವಿಕರ ಕಾಲದಿಂದ ಬಂದ ಕೌಟುಂಬಿಕ ಕಸುಬು]" ಎಂದು ಬಲ್ಬೀರ್ ತಮ್ಮ ಸುತ್ತಿಗೆ ಮತ್ತು ಉಳಿಯನ್ನು ದೇವದಾರು ಮರದ ಮೇಲೆ ಇಟ್ಟು, ಪಾರಿಯೊಂದಿಗೆ ಮಾತನಾಡಲು ನಿಂತರು.
ಜೌನಸಾರ್ ಪ್ರಾಂತ್ಯದಲ್ಲಿದ್ದೆವು. ಬೆಳಗಿನ ಬೆಚ್ಚಗಿನ ಸೂರ್ಯ ಪರ್ವತ ಶ್ರೇಣಿಯ ಮೇಲೆ ಏರಿ ಮಹಸು ದೇವತೆಗೆ ಮೀಸಲಾದ ದೇಗುಲದ ಮೇಲೆ ಬೆಳಕನ್ನು ಬೀರುತ್ತಿದ್ದ. 2025ರ ಮಾರ್ಚಿಯಲ್ಲಿ ಪಾರಿ ಈ ದೇವಾಲಯಕ್ಕೆ ಭೇಟಿ ನೀಡಿತ್ತು. ಈ ಸಮಯದಲ್ಲಿ ಅದರ ನಿರ್ಮಾಣ ಕಾರ್ಯವಿನ್ನೂ ಮುಗಿದಿರಲಿಲ್ಲ.
"ಮಂದಿರ್ಬನಾನೇಕಿಶುರ್ವಾತ್ಹಮೇಶಾನೀಚೇಸೇಹೋತಿ. ಪಹೇಲೇಬೇಸ್ಬನೇಗಾಫಿರ್ಉಪ್ಪರ್ಕಾ. ಸಬಸೇಜರೂರಿಹೈಪಿಲ್ಲರ್ಜಿಸ್ಪೇಢಾಂಚಾಖಡಾಹೋಗಾ [ದೇವಾಲಯನಿರ್ಮಾಣಯಾವಾಗಲೂಕೆಳಗಿನಿಂದಪ್ರಾರಂಭವಾಗುತ್ತದೆ — ಮೊದಲುಅಡಿಪಾಯ, ನಂತರಮೇಲ್ಭಾಗ. ಅತ್ಯಂತಮಹತ್ವದ್ದುಕಂಬ, ಅದರಮೇಲೆರಚನೆನಿಲ್ಲುತ್ತದೆ]" ಎಂದು ಬಲ್ಬೀರ್ ದೇಗುಲದ ಸುತ್ತ ನೋಡುತ್ತಾ ಹೇಳಿದರು.
ತಾಯಿನಾ ದೇಗುಲ ಕಟ್ಟಿ ಮುಗಿಸಲು ಒಂಬತ್ತು ವರ್ಷ ಹಿಡಿದಿತ್ತು ಎನ್ನುತ್ತಾರೆ ಈ ಅನುಭವಿ ಕುಶಲಕರ್ಮಿ. ಅದರಲ್ಲಿ ಸಾಕಷ್ಟು ಅಲಂಕಾರಿಕ ಅಂಶಗಳಿದ್ದವು. ಸಣ್ಣ ದೇವಸ್ಥಾನಗಳನ್ನಾದರೆ ಒಂದೆರಡು ವರ್ಷದಲ್ಲಿ ಕಟ್ಟಿ ಮುಗಿಸಬಹುದು.























