ಜುಲೈ ಮಧ್ಯಭಾಗದ ಸುಮಾರಿಗಿನ್ನೊಂದು ದಿನ, ಧಮ್ತರಿ ಪಟ್ಟಣದಿಂದ ಸುಮಾರು 15 ಕಿಲೋಮೀಟರ್ದೂರದಲ್ಲಿರುವ ಕೊಲಿಯಾರಿ-ಖರೆಂಗಾ ಗ್ರಾಮದರಸ್ತೆಯಲ್ಲಿ, ನಾವು ಮತ್ತೊಂದು ಕೃಷಿಕಾರ್ಮಿಕರ ಗುಂಪನ್ನು ಭೇಟಿಯಾದೆವು. "ನಾವುಕೆಲಸ ಮಾಡದಿದ್ದರೆ, ನಾವು ಹಸಿವಿನಿಂದ ಸಾಯುತ್ತೇವೆ. [ಕೋವಿಡ್-19 ಅಪಾಯದಿಂದಾಗಿ] ಮನೆಯಲ್ಲಿ ಸುರಕ್ಷಿತವಾಗಿರಲು ನಮಗೆಸಾಧ್ಯವಿಲ್ಲ" ಎಂದು ಧಮ್ತರಿ ಬ್ಲಾಕ್ನ ಖರೆಂಗಾಗ್ರಾಮದ ಭುಖಿನ್ ಸಾಹು ಹೇಳಿದರು. ಆಕೆ 24 ಜನರ ಗುಂಪಿನ ನಾಯಕಿ-ಗುತ್ತಿಗೆದಾರರಾಗಿದ್ದಾರೆ. "ನಾವು ಕಾರ್ಮಿಕೆಯರು ಮತ್ತುನಮಗೆ ನಮ್ಮ ಕೈ ಮತ್ತುಕಾಲುಗಳು ಮಾತ್ರ ಇವೆ. ಆದರೆಕೆಲಸ ಮಾಡುವಾಗ, ನಾವು ದೈಹಿಕಅಂತರವನ್ನು ಕಾಯ್ದುಕೊಳ್ಳುತ್ತಿದ್ದೇವೆ..."
ಅವಳು ಮತ್ತು ಇತರರು ರಸ್ತೆಯಎರಡೂ ಬದಿಗಳಲ್ಲಿ ಕುಳಿತು ಮನೆಯಿಂದತಂದಿದ್ದ ಅನ್ನ, ಬೇಳೆ ಮತ್ತುಸಬ್ಜಿಯ ಊಟವನ್ನು ತಿನ್ನುತ್ತಿದ್ದರು. ಅವರುಬೆಳಿಗ್ಗೆ 4 ಗಂಟೆಗೆ ಎಚ್ಚರಗೊಂಡು, ಅಡುಗೆಮಾಡಿ, ಮನೆಕೆಲಸಗಳಲ್ಲಿ ಮುಗಿಸಿ, ಬೆಳಗಿನ ಊಟಮಾಡಿ ಸುಮಾರು 6 ಗಂಟೆಗೆ ಹೊಲಕ್ಕೆತಲುಪುತ್ತಾರೆ. 12 ಗಂಟೆಗಳ ನಂತರ, ಸಂಜೆ 6 ಗಂಟೆಗೆ ಮನೆಗೆ ಹಿಂತಿರುಗುತ್ತಾರೆ. ಮತ್ತೆಅಡುಗೆ ಮಾಡಿ, ಇತರ ಕೆಲಸಗಳನ್ನುಮಾಡುತ್ತಾರೆ ಎಂದು ಭುಖಿನ್ ತನ್ನಮತ್ತು ಇತರ ಮಹಿಳೆಯರ ದಿನಚರಿಯಬಗ್ಗೆ ಹೇಳಿದರು.
"ನಾವುಪ್ರತಿದಿನ ಸುಮಾರು ಎರಡು ಎಕರೆಗಳಷ್ಟುನೆಡುತ್ತೇವೆ ಮತ್ತು ಪ್ರತಿ ಎಕರೆಗೆ 3,500 ರೂ.ಗಳನ್ನು ಪಡೆಯುತ್ತೇವೆ" ಎಂದುಭುಖಿನ್ ಹೇಳಿದರು. ಪ್ರತಿ ಎಕರೆಯಗುಂಪಿನ ದರವು ಎಕರೆಗೆ 3,500 ರೂ.ಗಳಿಂದ 4,000 ರೂ.ಗಳವರೆಗೆವ್ಯತ್ಯಾಸವಾಗುತ್ತಿದೆ (ಈ ಬಾರಿ, ಧಮ್ತರಿಯಲ್ಲಿ) ಇದು ಮಾತುಕತೆಗಳು ಮತ್ತುಗುಂಪಿನಲ್ಲಿರುವ ಕಾರ್ಮಿಕರ ಸಂಖ್ಯೆಯನ್ನು ಅವಲಂಬಿಸಿದೆ.
ಭುಖಿನ್ ಅವರ ಪತಿ ಕೆಲವುವರ್ಷಗಳ ಹಿಂದೆ ಭೋಪಾಲ್ಗೆಕೂಲಿ ಕೆಲಸ ಮಾಡಲು ಹೋಗಿಹಿಂತಿರುಗಲಿಲ್ಲ. "ಅವರು ನಮ್ಮನ್ನು ಈಹಳ್ಳಿಯಲ್ಲಿ ಬಿಟ್ಟು ಹೋಗಿದ್ದಾರೆ. ನಮ್ಮೊಂದಿಗೆಸಂಪರ್ಕದಲ್ಲಿಲ್ಲ" ಎಂದು ಭುಖಿನ್ ಹೇಳಿದರು. ಅವರ ಮಗ ಕಾಲೇಜಿನಲ್ಲಿದ್ದುಭುಖಿನ್ ಅವರ ಏಕೈಕ ಆದಾಯವೇಇಬ್ಬರು ಸದಸ್ಯರ ಕುಟುಂಬವನ್ನು ಪೋಷಿಸುತ್ತಿದೆ.
ಅದೇ ರಸ್ತೆಯಲ್ಲಿ, ನಾವು ಕೃಷಿ ಕಾರ್ಮಿಕರಮತ್ತೊಂದು ಗುಂಪನ್ನು ಭೇಟಿಯಾದೆವು - ಅವರಲ್ಲಿಹೆಚ್ಚಿನವರು ಮಹಿಳೆಯರು, ಕೆಲವು ಪುರುಷರು - ಭತ್ತದ ಸಸಿಗಳನ್ನು ನಾಟಿ ಮಾಡಲುಹೊಲಕ್ಕೆ ಸಾಗಿಸುತ್ತಿದ್ದರು. "ಇದು ನಮ್ಮ ಜೀವನೋಪಾಯದಮೂಲ. ಆದ್ದರಿಂದ ನಾವು ಕೆಲಸಮಾಡಲೇಬೇಕು. ನಾವು ಕೆಲಸ ಮಾಡದಿದ್ದರೆ, ಬೆಳೆ ಯಾರು ಉತ್ಪಾದಿಸುತ್ತಾರೆ? ಎಲ್ಲರಿಗೂತಿನ್ನಲು ಆಹಾರ ಬೇಕು" ಎಂದುಧಮ್ತರಿ ಬ್ಲಾಕ್ನ ದರ್ರಿಗ್ರಾಮದ ಗುತ್ತಿಗೆದಾರರಾದ ಸಬಿತಾ ಸಾಹು ಹೇಳಿದರು. "ನಾವು ಕೊರೊನಾಗೆ ಹೆದರಿದರೆ, ನಮಗೆಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾದರೆನಮ್ಮ ಮಕ್ಕಳಿಗೆ ಯಾರು ಆಹಾರನೀಡುತ್ತಾರೆ? ನಮ್ಮ ಕೆಲಸ [ಭತ್ತದಗದ್ದೆಗಳಲ್ಲಿ] ಹೇಗಿದ್ದರೂ ದೂರವನ್ನು ಕಾಯ್ದುಕೊಳ್ಳುವಂತಿದೆ." ಜುಲೈ ಮಧ್ಯದ ವೇಳೆಗೆ, ನಾನುಅವರನ್ನು ಭೇಟಿಯಾದಾಗ, ಸಬಿತಾ ಮತ್ತು ಅವರ 30 ಜನರ ಗುಂಪು 25 ಎಕರೆಗಳಲ್ಲಿ ಭತ್ತದಸಸಿಗಳನ್ನು ನೆಟ್ಟು ಎಕರೆಗೆ 3,600 ರೂ. ಗಳಿಸಿತ್ತು.