ಜುಲೈ 31, 2025 ರಂದು ಕವಿನ್ ಸೆಲ್ವಗಣೇಶ್ ಅವರನ್ನು ‘ಮಾರ್ಯಾದೆ’ ಹತ್ಯೆಯ ಹೆಸರಿನಲ್ಲಿ ಅತ್ಯಂತ ಕ್ರೂರವಾಗಿ ಕೊಲೆ ಮಾಡಲಾಯಿತು. ಅವರಿಗೆ ಕೇವಲ 27 ವರ್ಷ ವಯಸ್ಸಾಗಿತ್ತು. ಎಂಜಿನಿಯರಿಂಗ್ ಪದವೀಧರರಾಗಿದ್ದ ಅವರು ಚೆನ್ನೈಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಅವರ ಪೋಷಕರಾದ ಎಸ್. ತಮಿಳ್ಸೆಲ್ವಿ ಮತ್ತು ಚಂದ್ರಶೇಖರ್ ತೂತುಕುಡಿ ಜಿಲ್ಲೆಯ ಏರಲ್ ತಾಲೂಕಿನ ಆರುಮುಗಮಂಗಲಂನ ತರ್ಕು ಮಾಡ ಬೀದಿಯಲ್ಲಿ ವಾಸಿಸುತ್ತಿದ್ದಾರೆ.
ಕವಿನ್ ಮತ್ತು ಸುಭಾಷಿಣಿ ಶಾಲಾ ದಿನಗಳ ಸ್ನೇಹಿತರು, ಆ ಸ್ನೇಹ ಮುಂದೆ ಪ್ರೀತಿಯಾಗಿ ಬೆಳೆದಿತ್ತು. ಒಂದು ದಿನ, ಕವಿನ್ ತನ್ನ ತಾತನ ಆರೋಗ್ಯ ವಿಚಾರಿಸಲು ಹೋಗಿದ್ದಾಗ ಸುಭಾಷಿಣಿಯನ್ನು ಭೇಟಿಯಾಗಿದ್ದ - ಸುಭಾಷಿಣಿ ಅದೇ ಆಸ್ಪತ್ರೆಯಲ್ಲಿ ಸಿದ್ಧ ವೈದ್ಯೆಯಾಗಿ ಕೆಲಸ ಮಾಡುತ್ತಿದ್ದರು. ಒಂದು ದಿನ, ಕವಿನ್ ತನ್ನ ತಾತನ ಆರೋಗ್ಯ ವಿಚಾರಿಸಲು ಹೋಗಿದ್ದಾಗ ಸುಭಾಷಿಣಿಯನ್ನು ಭೇಟಿಯಾಗಿದ್ದರು - ಸುಭಾಷಿಣಿ ಅದೇ ಆಸ್ಪತ್ರೆಯಲ್ಲಿ ಸಿದ್ಧ ವೈದ್ಯರಾಗಿ ಕೆಲಸ ಮಾಡುತ್ತಿದ್ದರು.
ಸ್ವಲ್ಪ ಸಮಯದ ನಂತರ ಸುಭಾಷಿಣಿಯವರ ಸಹೋದರನಾದ ಸುಜಿತ್ ಅಲ್ಲಿಗೆ ಬಂದು, ʼನಮ್ಮ ಅಪ್ಪ ಅಮ್ಮ ನಿಮ್ಮನ್ನು ಬೇಟಿಯಾಗಬೇಕಂತೆ ಬನ್ನಿʼಎಂದು ಕವಿನ್ ಅವರನ್ನು ಕರೆದ. ಸುಜಿತ್ ತನ್ನ ಬೈಕಿನಲ್ಲೇ ಕರೆದುಕೊಂಡು ಹೋಗುವುದಾಗಿ ಹೇಳಿದ್ದ. ಇಬ್ಬರೂ ಜೊತೆಯಾಗಿ ಕೇವಲ ಎರಡು ಬೀದಿಗಳನ್ನಷ್ಟೇ ದಾಟಿದ್ದರು, ಅಲ್ಲಿ ಸುಜಿತ್ ಬೈಕ್ ನಿಲ್ಲಿಸಿ, ಚಾಕು ತೆಗೆದು ಅತ್ಯಂತ ಕ್ರೂರವಾಗಿ ಕವಿನ್ ಅವರನ್ನು ಕೊಲೆ ಮಾಡಿದ್ದ.
ಗಮನಿಸಬೇಕಾದ ಪ್ರಮುಖ ವಿಷಯವೆಂದರೆ ಕವಿನ್, ಸುಭಾಷಿಣಿ ಮತ್ತು ಸುಜಿತ್ ವರ್ಷಗಳಿಂದ ಆಪ್ತ ಸ್ನೇಹಿತರಾಗಿದ್ದರು. ಹಾಗಿದ್ದರೂ, ಸುಜಿತ್ ಕವಿನ್ ಮೇಲೆ ದಾಳಿ ಮಾಡುವಾಗ, "ಒಬ್ಬ ಪಳ್ಳಾರ್ [ಪರಿಶಿಷ್ಟ ಜಾತಿ] ಹುಡುಗ ನಮ್ಮ ಕುಟುಂಬದ ಹುಡುಗಿಯ ಮೇಲೆ ಕಣ್ಣು ಹಾಕುತ್ತಾನೆಯೇ? ಇನ್ನು ನನ್ನ ಅಪ್ಪ ಅಮ್ಮನಿಗೆ ನೆಮ್ಮದಿ ಸಿಗಲಿದೆ" ಎಂದು ಹೇಳಿದ್ದ.
ಇವು ಕವಿನ್ ಅವರನ್ನು ಕೊಲ್ಲುವ ಮೊದಲು ಕವಿನ್ ಆಡಿದ ನಿಖರ ನುಡಿಗಳು ಎಂದು ಆರೋಪಿಸಲಾಗಿದೆ. ಅಂದ ಹಾಗೆ ಸುಜಿತನ ಅಪ್ಪ ಮತ್ತು ಅಮ್ಮ ಇಬ್ಬರೂ ಪೊಲೀಸರು.
ಕವಿನ್ ಎಂಜಿನಿಯರಿಂಗ್ ಪದವೀಧರರಾಗಿದ್ದರು. ಶಿಕ್ಷಣ, ಉದ್ಯೋಗ, ಆರ್ಥಿಕ ಸ್ಥಿರತೆ ಜಾತಿಯನ್ನು ಅಳಿಸಿಹಾಕಬಹುದು ಎನ್ನುವ ಅಪಾಯಕಾರಿ ಭ್ರಮೆಯಲ್ಲಿ ಸಮಾಜ ಬದುಕುತ್ತಿದೆ. ಕವಿನ್ ಅವರ ವಿಷಯದಲ್ಲಿ ಅದು ಎಂತಹ ಸುಳ್ಳು ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.