2017 ರ ನನ್ನ ಫೋಟೋ ಪ್ರದರ್ಶನ ಪರಿಯೊಂದಿಗೆ ಕೆಲಸ ಮಾಡಲು ಕಾರಣವಾಯಿತು. ಒಬ್ಬ ದೃಶ್ಯ ಕಲಾವಿದನಾಗಿ ನನ್ನ ಆ ಪ್ರದರ್ಶನವು ವಾನವಿಲ್ ರೇವತಿ ಮತ್ತು ಕಲಾವಿದರಾದ ನಟರಾಜನ್ ಅವರ ಸಹಕಾರ ಇಲ್ಲದೆ ಸಾಧ್ಯವಾಗುತ್ತಿರಲಿಲ್ಲ. 2024 ರ ತ್ಸುನಾಮಿಯ ನಂತರ, ರೇವತಿಯವರು ನರಿಕ್ಕುರವರ್ ಮತ್ತು ಬೂಮ್ ಬೂಮ್ ಮಾಟ್ಟ್ಕಾರ್ ಸಮುದಾಯಗಳ ಮಕ್ಕಳಿಗಾಗಿ ವಾನವಿಲ್ ಶಾಲೆಯನ್ನು ಆರಂಭಿಸಿದರು. ಅವರ ಮೂಲಕವೇ ನಾವು ತುರುವಿಕ್ಕಾಡ್ ಮತ್ತು ಒನ್ನನ್ಕಾಡ್ ಜನರು ಮತ್ತು ಮಕ್ಕಳನ್ನು ಭೇಟಿ ಮಾಡಿದೆ. ಇದರ ನಂತರ ಬರಹ ಮತ್ತು ಫೋಟೋಗ್ರಾಫ್ಗಳ ಮೂಲಕ ಅವರ ಬದುಕನ್ನು ದಾಖಲಿಸಲು ನಿರ್ಧರಿಸಿದೆ.
ಪರಿಶಿಷ್ಟ ಪಂಗಡವೆಂದು ಪರಿಗಣಿಸಲಾಗಿರುವ ಬೂಮ್ ಬೂಮ್ ಮಾಟ್ಟ್ಕಾರ್ಗಳನ್ನು ಅದಿಯಾನ್ (ಅತಿಯಾನ್ ಎಂದೂ ಉಚ್ಚರಿಸುತ್ತಾರೆ) ಎಂದು ಪಟ್ಟಿಮಾಡಲಾಗಿದೆ. ಮಾಟ್ಟ್ಕಾರರ್ ಮತ್ತು ದನ ಮೇಯಿಸುವವರು ನುಡಿಸುವ ಎರಡು ಬದಿಗಳಿರುವ, ಮರಳು ಗಡಿಯಾರದ ಆಕಾರದ ಉರುಮಿ ಎಂಬ ವಾದ್ಯದ ಸದ್ದಿನಿಂದ ಇವರಿಗೆ ʼಬೂಮ್ ಬೂಮ್ʼ ಎಂಬ ಹೆಸರು ಬಂದಿದೆ. ಅಲಂಕರಿಸಿದ ಎತ್ತುಗಳನ್ನು ಬಳಸಿ ಭವಿಷ್ಯ ನುಡಿಯುವ ತಮ್ಮ ವೃತ್ತಿಯಿಂದ ಅವರಿಗೆ ಈ ಹೆಸರು ಬಂದಿದೆ.






























