"ಲಾಕ್ಡೌನ್ ಸಮಯದಲ್ಲಿ ನಾವುಸಾಕಷ್ಟು ಕಷ್ಟಗಳನ್ನು ಎದುರಿಸಿದ್ದೇವೆ. ಕೋವಿಡ್ -19 ಸಮೀಕ್ಷೆಗಳನ್ನು ಹೊರತುಪಡಿಸಿ, ಏಪ್ರಿಲ್ ನಿಂದ ಜುಲೈವರೆಗೆ 27 ಹೆರಿಗೆಗಳನ್ನು ನಿರ್ವಹಿಸಿದೆ. ತಾಯಿಯ ತಪಾಸಣೆಯಿಂದ ಹಿಡಿದುಹೆರಿಗೆಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆಕರೆದೊಯ್ಯುವವರೆಗೆ, ಅವೆಲ್ಲದಕ್ಕೂ ಇದ್ದೆ" ಎಂದು ಒಸ್ಮಾನಾಬಾದ್ ಜಿಲ್ಲೆಯನಿಲೆಗಾಂವ್ ಗ್ರಾಮದ ಮಾನ್ಯತೆ ಪಡೆದಸಾಮಾಜಿಕ ಆರೋಗ್ಯ ಕಾರ್ಯಕರ್ತೆ (ಆಶಾಕಾರ್ಯಕರ್ತೆ) ತನುಜಾ ವಾಘೋಲೆ ಹೇಳುತ್ತಾರೆ.
ಮಾರ್ಚ್ ಅಂತ್ಯದಲ್ಲಿ ಲಾಕ್ಡೌನ್ ಶುರುವಾದನಂತರ, ತನುಜಾ ಪ್ರತಿದಿನ ಹೊರಡುವಮೊದಲು ಮನೆಕೆಲಸವನ್ನು ಪೂರ್ಣಗೊಳಿಸಲು, ತನ್ನ ಪತಿ ಮತ್ತುಇಬ್ಬರು ಗಂಡು ಮಕ್ಕಳಿಗೆ ಅಡುಗೆಮಾಡಲು ಬೆಳಿಗ್ಗೆ 4 ಗಂಟೆಗೆ (ಸಾಮಾನ್ಯ ಸಮಯ 7:30 ಕ್ಕೆಬದಲಾಗಿ) ಏಳಲು ಪ್ರಾರಂಭಿಸಿದರು. "7.30ರೊಳಗೆ ಕೆಲಸ ಪ್ರಾರಂಭಿಸದಿದ್ದರೆ, ಎಲ್ಲರನ್ನೂ ಭೇಟಿಯಾಗಲು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ, ಜನರು ನಮ್ಮಿಂದ ಮತ್ತು ನಮ್ಮಸೂಚನೆಗಳಿಂದ ತಪ್ಪಿಸಿಕೊಳ್ಳಲು ತಮ್ಮ ಮನೆಗಳನ್ನು ಬೇಗನೆಬಿಡುತ್ತಾರೆ" ಎಂದು ಅವರು ಹೇಳುತ್ತಾರೆ.
ತಿಂಗಳಿಗೆಸುಮಾರು 15-20 ದಿನಗಳವರೆಗೆ ದಿನಕ್ಕೆ ಕೇವಲ 3-4 ಗಂಟೆಗಳಆಶಾ ಕೆಲಸ ಮಾಡುವಬದಲು, 2010ರಿಂದ ಆಶಾ ಕಾರ್ಯಕರ್ತೆಆಗಿರುವ 40 ವರ್ಷದ ತನುಜಾ, ಈಗಪ್ರತಿದಿನ ಸುಮಾರು ಆರು ಗಂಟೆಗಳಕಾಲ ರೌಂಡ್ಸ್ ಹೋಗುತ್ತಾರೆ.
ಕೋವಿಡ್ - 19 ಸಮೀಕ್ಷೆಯು ಏಪ್ರಿಲ್ 7ರಂದು ತುಳಜಾಪುರತಾಲ್ಲೂಕಿನ ನಿಲೆಗಾಂವ್ ಗ್ರಾಮದಲ್ಲಿ ಪ್ರಾರಂಭವಾಯಿತು. ಆಶಾ ಸಹೋದ್ಯೋಗಿಗಳಾದ ತನುಜಾಮತ್ತು ಅಲ್ಕಾ ಮುಲೈಜಾ ಪ್ರತಿದಿನತಮ್ಮ ಹಳ್ಳಿಯ 30 - 35 ಮನೆಗಳಿಗೆ ಭೇಟಿ ನೀಡುತ್ತಾರೆ. "ನಾವು ಮನೆ ಮನೆಗೆ ಹೋಗಿಯಾರಿಗಾದರೂ ಜ್ವರ ಅಥವಾ ಇನ್ನಾವುದೇಕೊರೊನಾವೈರಸ್ ರೋಗಲಕ್ಷಣವಿದೆಯೇ ಎಂದು ಪರಿಶೀಲಿಸುತ್ತೇವೆ" ಎಂದರು. ಜ್ವರದ ಇರುವವರಿಗೆ ಪ್ಯಾರಸಿಟಮಾಲ್ ಮಾತ್ರೆಗಳನ್ನುನೀಡಲಾಗುತ್ತದೆ. ಅವರಿಗೆ ಕೊರೊನಾ ವೈರಸ್ ರೋಗಲಕ್ಷಣಗಳಿದ್ದರೆ 25 ಕಿಲೋಮೀಟರ್ ದೂರದಲ್ಲಿರುವ ಅಂದೂರ್ ಗ್ರಾಮದ ಪ್ರಾಥಮಿಕಆರೋಗ್ಯ ಕೇಂದ್ರವನ್ನು ಎಚ್ಚರಿಸಲಾಗುತ್ತದೆ. (ನಂತರ ಪಿಎಚ್ಸಿಕೋವಿಡ್ ಪರೀಕ್ಷೆಗಾಗಿ ಮಾದರಿಗಳನ್ನು ಸಂಗ್ರಹಿಸಲು ಯಾರನ್ನಾದರೂ ಗ್ರಾಮಕ್ಕೆ ಕಳುಹಿಸುತ್ತದೆ; ಪರೀಕ್ಷಾಫಲಿತಾಂಶವು ಸಕಾರಾತ್ಮಕವಾಗಿದ್ದರೆ, ವ್ಯಕ್ತಿಯನ್ನು ಕ್ವಾರಂಟೈನ್ ಮತ್ತು ಚಿಕಿತ್ಸೆಗಾಗಿ ತುಳಜಾಪುರದಗ್ರಾಮೀಣ ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತದೆ.)
ಆಶಾ ಕಾರ್ಯಕರ್ತೆಯರು ಹಳ್ಳಿಯ ಎಲ್ಲಾ ಮನೆಗಳನ್ನುತಲುಪಲು ಸುಮಾರು ಹದಿನೈದು ದಿನಗಳನ್ನುತೆಗೆದುಕೊಳ್ಳುತ್ತಾರೆ - ನಂತರ ಅವರು ಮತ್ತೆ ಮೊದಲಿನಿಂದ ಪ್ರಾರಂಭಿಸುತ್ತಾರೆ. ನಿಲೆಗಾಂವ್ ಪರಿಧಿಯಲ್ಲಿ, ಒಂದು ಕಾಲದಲ್ಲಿ ಅಲೆಮಾರಿಗಳಾದಪರಿಶಿಷ್ಟ ಪಂಗಡಕ್ಕೆ ಸೇರಿರುವ, ಲಾಮನ್ಸಮುದಾಯದ ಎರಡು ತಾಂಡಾಗಳಿವೆ. ಕೇಂದ್ರಗ್ರಾಮ ಮತ್ತು ತಾಂಡಾಗಳ ಒಟ್ಟುಜನಸಂಖ್ಯೆಯು ಸುಮಾರು 3,000 ಎಂದು ತನುಜಾ ಅಂದಾಜಿಸಿದರು. (ಜನಗಣತಿ 2011 ನೈಲ್ಗಾಂವ್ 452 ಮನೆಗಳನ್ನು ಗುರುತಿಸಿದೆ.












