“ನಾನು ಓವಿ ಅನುವಾದದ ಕೆಲಸವನ್ನು ಮುಂದುವರೆಸುತ್ತೇನೆ.”
ಈ ಮಾತು ಹೇಳುವಾಗ ಆಶಾ ತಾಯಿಯವರಿಗೆ ಎಂಬತೈದರ ಹತ್ತಿರದ ವಯಸ್ಸು. ಆ ಸಮಯದಲ್ಲಿ ಅವರು ಜಾರಿಬಿದ್ದು ಉಂಟಾದ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದರು. ಅಲ್ಲದೆ ಅವರಿಗೆ ಆಗ ಲ್ಯಾಪ್ಟಾಪ್ ಬಳಸಲು ಕಷ್ಟವಾಗುತ್ತಿತ್ತು. ಕೊನೆಗೆ ನಾವು ಅನುವಾದವನ್ನು ಕೈಬರೆಹದಲ್ಲಿ ಮಾಡಿಸುವ ತೀರ್ಮಾನಕ್ಕೆ ಬಂದೆವು. ಅವರು ಈ ರೀತಿಯಾಗಿ 80ರಿಂದ 100ರಷ್ಟು ದ್ವಿಪದಿಗಳನ್ನು ಕಾಗದದ ಮೇಲೆ ಅನುವಾದಿಸಿದರು. ಅದು ಮುಗಿದ ನಂತರ ಅವರು ಇನ್ನೊಂದು ಭಾಗದ ಅನುವಾದಕ್ಕೂ ಮುಂದಾದರು.
ಈ ಸಂದರ್ಭದಲ್ಲಿ ಜಿತೇಂದ್ರ ಮೇದ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದರು ಮತ್ತು ಅವುಗಳನ್ನು ದತ್ತಾಂಶಗಳಿಗೆ ಸೇರಿಸುವ ಕೆಲಸವನ್ನು ಮಾಡಿದರು.
“ಗ್ರಂಥಪಾಲಕರು ಎಂದರೆ ಪುಸ್ತಕಗಳನ್ನಷ್ಟೇ ನೋಡಿಕೊಳ್ಳುವ ಗಂಭೀರ ವ್ಯಕ್ತಿಗಳು ಎನ್ನುವ ನಂಬಿಕೆ ಕಾಲೇಜು ದಿನಗಳವರೆಗೂ ಇತ್ತು. ಆದರೆ, 1996ರಲ್ಲಿ ಹೇಮತಾಯಿ ರಾಯಿರ್ಕರ್ ಅವರ ಮನೆಯಲ್ಲಿ ಆಶಾತಾಯಿ ಒಗಲೆಯವರನ್ನು ಭೇಟಿಯಾದಾಗ ನನ್ನ ಈ (ಸೀಮಿತ) ಗ್ರಹಿಕೆ ದೂರವಾಯಿತು” ಎಂದು ಜಿತೇಂದ್ರ ಮೇದ್ ಹೇಳುತ್ತಾರೆ. ಅವರು 1996ರಿಂದ ಆಶಾತಾಯಿಯವರ ಕೊನೆಯ ದಿನಗಳವರೆಗೂ, ಸುಮಾರು ಮೂರು ದಶಕಗಳ ಕಾಲ ಆಶಾತಾಯಿಯವರೊಂದಿಗೆ ಬೀಸುಕಲ್ಲಿನ ಪದಗಳ ಅನುವಾದದ ವಿಷಯದಲ್ಲಿ ಕೆಲಸ ಮಾಡಿದರು.






