"ನಮ್ಮಕೆಲಸ ಮೊದಲೇ ಸಂಕಷ್ಟದಲ್ಲಿತ್ತು" ಎಂದುಪಶ್ಚಿಮ ದೆಹಲಿಯ ಉತ್ತಮ್ ನಗರಪ್ರದೇಶದ ಕುಂಬಾರ ಜಗ್ಮೋಹನ್ ಹೇಳುತ್ತಾರೆ, ಮರ ಮತ್ತು ಮರದಪುಡಿಯಿಂದ ಉರಿಯುವ ಕುಂಬಾರಿಕೆ ಕುಲುಮೆಗಳನ್ನುಕೆಡವಲು ಸರ್ಕಾರಿ ಅಧಿಕಾರಿಗಳು ಸುಮಾರುಒಂದು ವರ್ಷದ ಹಿಂದೆ ಹೊರಡಿಸಿದಆದೇಶಗಳನ್ನು ಅವರು ಉಲ್ಲೇಖಿಸುತ್ತಿದ್ದರು. "ಇದರಿಂದಾಗಿ, ಕೆಲವು ಕುಂಬಾರರು ಸಣ್ಣಸಂಖ್ಯೆಯಲ್ಲಿ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ, ಕೆಲವರು ಕೇವಲ ಮಾರಾಟವನ್ನಷ್ಟೇ ಮಾಡುತ್ತಿದ್ದಾರೆ ಮತ್ತುಉಳಿದವರು ಈ ಕೆಲಸವನ್ನುತೊರೆದಿದ್ದಾರೆ. ಮತ್ತು ಈಗ ಈಸಾಂಕ್ರಾಮಿಕ ಪಿಡುಗು ಮತ್ತು ಲಾಕ್ಡೌನ್ನಮ್ಮ ಮುಖ್ಯ [ಮಾರ್ಚ್ ತಿಂಗಳಿನಿಂದಜುಲೈ] ವ್ಯಾಪಾರದ ಸಮಯದಲ್ಲೇ ಹೊಡೆತವನ್ನು ನೀಡಿದೆ."
ಜಗಮೋಹನ್ (ಮೇಲಿನ ಮುಖಪುಟ ಚಿತ್ರದಲ್ಲಿ; ಅವರುತಮ್ಮ ಮೊದಲ ಹೆಸರನ್ನು ಮಾತ್ರಬಳಸುತ್ತಾರೆ) 48 ವರ್ಷ ವಯಸ್ಸಿನವರಾಗಿದ್ದು, ಮೂರುದಶಕಗಳಿಗೂ ಹೆಚ್ಚು ಕಾಲದಿಂದ ಕುಂಬಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. "ಒಳ್ಳೆಯವಿಷಯವೆಂದರೆ, ಈ ವರ್ಷಜನರು ಫ್ರಿಡ್ಜ್ನಿಂದ ತಣ್ಣೀರುಕುಡಿಯುವುದನ್ನು ತಪ್ಪಿಸುತ್ತಿರುವುದರಿಂದ [ಕೋವಿಡ್-19 ನ ಆತಂಕದಿಂದಾಗಿ] ಮಟ್ಕಾಗಳಿಗೆ [ಹೆಚ್ಚಿನ] ಬೇಡಿಕೆಯಿರುವುದು ಗಮನಕ್ಕೆ ಬಂತು. ಆದರೆ ಲಾಕ್ಡೌನ್ ಸಮಯದಲ್ಲಿ ಜೇಡಿಮಣ್ಣಿನಕೊರತೆಯಿದ್ದ ಕಾರಣ, ಸಾಕಷ್ಟು ಸ್ಟಾಕ್ಸಿದ್ಧವಾಗಿಡಲು ಸಾಧ್ಯವಾಗಲಿಲ್ಲ." ಸಾಮಾನ್ಯವಾಗಿ, ಇಲ್ಲಿ ಒಬ್ಬ ಕುಂಬಾರನುಕುಟುಂಬ ಸದಸ್ಯರ ಸಹಾಯದಿಂದ 2-3 ದಿನಗಳಲ್ಲಿಸುಮಾರು 150-200 ಮಟ್ಕಾಗಳನ್ನು ತಯಾರಿಸಬಹುದು.
ಕಾಲೋನಿಯ ಬೀದಿಗಳಲ್ಲಿ ಒಣ ಜೇಡಿಮಣ್ಣಿನರಾಶಿಗಳಿವೆ, ಹೆಚ್ಚು ಕಾರ್ಯನಿರತ ಸಮಯದಲ್ಲಿಬಾಗಿಲುಗಳ ಹಿಂದಿನಿಂದ ಕುಂಬಾರರ ಚಕ್ರಗಳಸದ್ದು ಮತ್ತು ಮಡಿಕೆಗಳನ್ನು ಬಡಿಯುವ ಸದ್ದು, ನೂರಾರು ಕೈಯಿಂದ ಮಾಡಿದ ಮಡಿಕೆಗಳು, ದೀಪಗಳು, ವಿಗ್ರಹಗಳು ಮತ್ತು ಇತರವಸ್ತುಗಳು ಅಂಗಳಗಳಲ್ಲಿ ಮತ್ತು ಕೆಲಸದ ಶೆಡ್ಗಳಲ್ಲಿ ಒಣಗುತ್ತಿರುತ್ತವೆ. ನಂತರಇವುಗಳನ್ನು ಗೇರು ಬಣ್ಣದ (ಟೆರಾಕೋಟಾ ವಸ್ತುಗಳಿಗೆ ನೈಸರ್ಗಿಕಟೋನ್ ನೀಡುವ ಕೆಂಪು ಜೇಡಿಮಣ್ಣಿನದ್ರವ) ಕೋಟ್ ಗಾಗಿ ಸ್ಥಳಾಂತರಿಸಲಾಗುತ್ತದೆ, ಅದನಂತರ ಸಾಮಾನ್ಯವಾಗಿ ಇಲ್ಲಿನ ಮನೆಗಳ ಟೆರೇಸ್ಗಳಲ್ಲಿ ಸಾಂಪ್ರದಾಯಿಕ ಮಣ್ಣಿನಕುಲುಮೆಯಾದ ಭಟ್ಟಿಯಲ್ಲಿ ಸುಡಲಾಗುತ್ತದೆ. ಹೊರಗೆ, ಸಂದರ್ಶಕರು ಮತ್ತುಮಾರಾಟಗಾರರಿಗೆ ಖರೀದಿಸಲು ಸಿದ್ಧ ವಸ್ತುಗಳನ್ನುಪ್ರದರ್ಶಿಸಲಾಗುತ್ತದೆ.
ಸ್ಥಳೀಯವಾಗಿ ಪ್ರಜಾಪತಿ ಕಾಲೋನಿ ಅಥವಾಕುಮ್ಹಾರ್ ಗ್ರಾಮ ಎಂದೂ ಕರೆಯಲ್ಪಡುವಈ ನೆರೆಹೊರೆಯು 400-500 ಕ್ಕೂಹೆಚ್ಚು ಕುಟುಂಬಗಳಿಗೆ ನೆಲೆಯಾಗಿದೆ ಎಂದು ಕಾಲೋನಿಯ ಪ್ರಧಾನ್ಹರ್ಕಿಶನ್ ಪ್ರಜಾಪತಿ ಅಂದಾಜಿಸುತ್ತಾರೆ. "ಉತ್ತರಪ್ರದೇಶ ಮತ್ತು ಬಿಹಾರದ ಅನೇಕಕುಂಬಾರರು ಮತ್ತು ಸಹಾಯಕರು ಕೆಲಸವಿಲ್ಲದಕಾರಣ ತಮ್ಮ ಹಳ್ಳಿಗಳಿಗೆ ಹಿಂತಿರುಗಿದ್ದಾರೆ" ಎಂದು 1990 ರಲ್ಲಿ ರಾಷ್ಟ್ರೀಯ ಪ್ರಶಸ್ತಿಮತ್ತು 2012 ರಲ್ಲಿ ಸರ್ಕಾರದ ಶಿಲ್ಪ್ಗುರು ಪ್ರಶಸ್ತಿ ವಿಜೇತರಾದ 63 ವರ್ಷದಪ್ರಜಾಪತಿ ಹೇಳುತ್ತಾರೆ.










